ಸಂತ ಅಂತೋನಿ ಚರ್ಚ್ ವಾರ್ಷಿಕ ಮಹೋತ್ಸವ 2025
ಸಂತ ಅಂತೋನಿ ಚರ್ಚ್ ವಾರ್ಷಿಕ ಮಹೋತ್ಸವ 2025
Diocese of Mangalore
ನಾರಾವಿಯ ಸಂತ ಅಂತೋನಿ ಚರ್ಚ್ನಲ್ಲಿ 22 ಜನವರಿ, 2025ರಂದು ವಾರ್ಷಿಕ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಭ್ರಮದ ದಿವ್ಯ ಬಲಿಪೂಜೆಯನ್ನು ಚರ್ಚ್ ಮಾಜಿ ಧರ್ಮಗುರುಗಳಾದ ವಂದನೀಯ ವಲೇರಿಯನ್ ಫೆರ್ನಾಂಡಿಸ್ರವರು ನೆರವೇರಿಸಿದರು. ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ವಾಲ್ಟರ್ ಡಿ'ಮೆಲ್ಲೊ, ನಾರಾವಿ ಚರ್ಚ್ ಧರ್ಮಗುರುಗಳಾದ ವಂದನೀಯ ಜೆರೋಮ್ ಡಿ'ಸೋಜ, ಪ್ರಾಂಶುಪಾಲರಾದ ವಂದನೀಯ ಆಲ್ವಿನ್ ಸೆರಾವೊ, ಬೆಳ್ತಂಗಡಿ ವಲಯದ ಧರ್ಮಗುರುಗಳು ಹಾಗೂ ಹಲವಾರು ಧರ್ಮಗುರುಗಳು ಮತ್ತು ಊರ- ಪರವೂರ ಭಕ್ತಾದಿಗಳು ದಿವ್ಯ ಬಲಿಪೂಜೆಯಲ್ಲಿ ಭಕ್ತಿಯಿಂದ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾಜಿ ಧರ್ಮಗುರುಗಳಾದ ವಂದನೀಯ ಫಾದರ್ ವಲೇರಿಯನ್ ಫೆರ್ನಾಂಡಿಸ್ರವರನ್ನು ಚರ್ಚ್ ವತಿಯಿಂದ, ಅವರು ನೀಡಿದ ಸೇವೆಗಾಗಿ ಸನ್ಮಾನಿಸಲಾಯಿತು.