ಈಸ್ಟರ್ ಹಬ್ಬದ ಆಚರಣೆ - 20/04/2025

ಯೇಸುವಿನ ಪುನರುತ್ಥಾನದ ಸ್ಮರಣೆ ಹಾಗೂ ಈಸ್ಟರ್ ಹಬ್ಬದ ಆಚರಣೆಯನ್ನು ಸಂತ ಅಂತೋನಿ ಚರ್ಚ್‌ನಲ್ಲಿ ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಶನಿವಾರ ಸಂಜೆ ಚರ್ಚ್‌ನಲ್ಲಿ ಈಸ್ಟರ್ ಜಾಗರಣೆ ನಡೆಯಿತು. ಪ್ರಾರ್ಥನಾ ವಿಧಿಯೊಂದಿಗೆ ಬಲಿಪೂಜೆಯನ್ನು ಆರಂಭಿಸಲಾಯಿತು. ಬೆಳಕಿನ ಆಶೀರ್ವಚನ ನಡೆಸಿ ಮೊಂಬತ್ತಿ ಬೆಳಗುವ ಮೂಲಕ ವಿಧಿ ವಿಧಾನಗಳು ಪ್ರಾರಂಭಗೊಂಡವು. ಬಲಿಪೂಜೆಯಲ್ಲಿ ದೇವರ ವಾಕ್ಯ ಬೋಧನೆ, ಕೀರ್ತನೆಗಳು ಹಾಗೂ ಪ್ರವಚನ ನಡೆಯಿತು. ವಿವಿಧ ಸಂಸ್ಕಾರಗಳಿಗೆ ಬಳಸುವ ಪವಿತ್ರ ಜಲದ ಆಶೀರ್ವಚನ ನಡೆಸಲಾಯಿತು. ದಿವ್ಯ ಬಲಿಪೂಜೆಯಲ್ಲಿ ಚರ್ಚ್‌ ಧರ್ಮಗುರುಗಳಾದ ವಂದನೀಯ ಜೆರೋಮ್ ಡಿ'ಸೋಜ, ಪ್ರಾಂಶುಪಾಲರಾದ ವಂದನೀಯ ಆಲ್ವಿನ್ ಸೆರಾವೊ ಹಾಗೂ ಚರ್ಚ್‌ನ ಎಲ್ಲಾ ಕ್ರೈಸ್ತ ಬಾಂಧವರು ಉಪಸ್ಥಿತರಿದ್ದು, ಕ್ರಿಸ್ತರ ಪುನರುತ್ಥಾನದ ಸಂಭ್ರಮವನ್ನು ಸಂಭ್ರಮಿಸಿದರು.