ಫಾ| ಫಾವೊಸ್ತಿನ್ ಕೋರ್ಟಿ ದಿನ ಆಚರಣೆ
Diocese of Mangalore
ಫಾ| ಫಾವೊಸ್ತಿನ್ ಕೋರ್ಟಿ ದಿನ ಆಚರಣೆ
ಅಕ್ಟೋಬರ್ 09,2024. ಸಂತ ಅಂತೋನಿ ಚರ್ಚ್, ನಾರಾವಿ ಇದರ ಸಂಸ್ಥಾಪಕರಾದ ದಿ| ಫಾ| ಫಾವೊಸ್ತಿನ್ ಕೋರ್ಟಿಯವರ ಪುಣ್ಯಸ್ಮರಣೆಯನ್ನು 2024ರ, ಅಕ್ಟೋಬರ್ 09 ರಂದು ನೆರವೇರಿಸಲಾಯಿತು. ಫಾ| ಫಾವೊಸ್ತಿನ್ ಕೋರ್ಟಿಯವರು ನಿಧನರಾಗಿ 98 ವರ್ಷಗಳು ಕಳೆದವು. ಇದರ ಸ್ಮರಣಾರ್ಥವಾಗಿ ದಿವ್ಯಬಲಿಪೂಜೆಯನ್ನು ಬೆಳ್ತಂಗಡಿ ಚರ್ಚ್ ಧರ್ಮಗುರುಗಳು ಹಾಗೂ ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಫಾದರ್ ವಾಲ್ಟರ್ ಡಿಮೆಲ್ಲೊರವರು ನೆರವೇರಿಸಿ ಫಾ| ಕೋರ್ಟಿಯವರ ಸೇವೆಯನ್ನು ಸ್ಮರಿಸಿದರು. ಚರ್ಚ್ ಧರ್ಮಗುರುಗಳಾದ ವಂ| ಫಾ| ಜೆರೊಮ್ ಡಿ'ಸೋಜ, ಪ್ರಾಂಶುಪಾಲರಾದ ವಂ| ಫಾ| ಆಲ್ವಿನ್ ಸೆರಾವೊ ಹಾಗೂ ಬೆಳ್ತಂಗಡಿ ವಲಯದ ಧರ್ಮಗುರುಗಳು ಹಾಗೂ ಚರ್ಚ್ನ ಭಕ್ತಾಧಿಗಳು ದಿವ್ಯಬಲಿಪೂಜೆಯಲ್ಲಿ ಪಾಲ್ಗೊಂಡರು. ನಂತರ ಅವರು ವಾಸವಿದ್ದ ನಿವಾಸಕ್ಕೆ ತೆರಳಿ ಅವರ ಮೂರ್ತಿಗೆ ಪುಷ್ಪಾರ್ಚನೆಯನ್ನು ನೆರವೇರಿಸಲಾಯಿತು. ಬಲಿಪೂಜೆಯ ನಂತರ ಎಲ್ಲಾ ಭಕ್ತಾಧಿಗಳಿಗೆ ಸಹಭೋಜನದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.