ಮಾದಕ ವಸ್ತುಗಳು ಮನುಕುಲಕ್ಕೆ ಅಂಟಿದ ಮಹಾಶಾಪ - ಶ್ರೀ ವಿವೇಕ್ ವಿನ್ಸೆಂಟ್ ಪಾಯ್ಸ್
Diocese of Mangalore
ಮಾದಕ ವಸ್ತುಗಳು ಮನುಕುಲಕ್ಕೆ ಅಂಟಿದ ಮಹಾಶಾಪ - ಶ್ರೀ ವಿವೇಕ್ ವಿನ್ಸೆಂಟ್ ಪಾಯ್ಸ್
ಸಪ್ಟೆಂಬರ್ 22, 2024; ಸಪ್ಟೆಂಬರ್ ತಿಂಗಳು ಡ್ರಗ್ಸ್ ವಿರೋಧಿ ಜಾಗೃತಿ ಮಾಸವನ್ನಾಗಿ ಆಚರಿಸಬೇಕೆಂಬ ಮಂಗಳೂರು ಧರ್ಮಪ್ರಾಂತ್ಯದ ಕರೆಯ ಮೇರೆಗೆ ಸಂತ ಅಂತೋನಿ ಚರ್ಚ್ ನಾರಾವಿಯಲ್ಲಿ ಸಪ್ಟೆಂಬರ್ 22, 2024 ಭಾನುವಾರದಂದು ಸಂತ ಅಂತೋನಿ ಚರ್ಚ್ ಯುವಜನ ಆಯೋಗ, ಶಿಕ್ಷಣ ಆಯೋಗ, ಕುಟುಂಬ ಆಯೋಗ, ಆರೋಗ್ಯ ಆಯೋಗ್ಯ ಹಾಗೂ ಸಾಮಾಜಿಕ ಸಂವಹನ ಆಯೋಗ ಇವರ ಸಹಭಾಗಿತ್ವದಲ್ಲಿ ಡ್ರಗ್ಸ್ ವಿರೋಧಿ ಜನಜಾಗೃತಿ ಜಾಥಾವನ್ನು ಆಯೋಜಿಸಲಾಗಿತ್ತು. ವಿವಿಧ ಘೋಷಣೆಗಳನ್ನು ಕೂಗುತ್ತಾ ನಾರಾವಿ ಚರ್ಚ್ನಿಂದ ನಾರಾವಿ ಪೇಟೆಯವರೆಗೆ ಮೆರವಣಿಗೆಯಲ್ಲಿ ಸಾಗಿ, ನಾರಾವಿ ಪೇಟೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಾದಕ ವಸ್ತುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯ್ಸ್ರವರು ತಮ್ಮ ದಿಕ್ಕೂಚಿ ಭಾಷಣದಲ್ಲಿ 'ಮಾದಕ ವಸ್ತುಗಳು ಮನುಕುಲಕ್ಕೆ ಅಂಟಿದ ಮಾಹಾಶಾಪ', ಇದೊಂದು ಭೀಕರವಾದ ಸಮಸ್ಯೆ ಮಾದಕ ವಸ್ತುಗಳ ಚಟ ಪ್ರಧಾನ ಐದು ಕಾಯಿಲೆಗಳಲ್ಲಿ ಒಂದು. ಮಾದಕ ವಸ್ತುಗಳನ್ನು (ಡ್ರಗ್ಸ್) ಸಂಪೂರ್ಣವಾಗಿ ನಿಷೇಧ ಮಾಡಬೇಕಾದರೆ ಜನಾಂದೋಲನದ ಮೂಲಕ ಸಮಾಜದ ವಿವಿಧ ಹಂತಗಳಲ್ಲಿ ಡ್ರಗ್ಸ್ ವಿರೋಧಿ ಜನಜಾಗೃತಿ ಜಾಥಾ ಅತ್ಯಗತ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರೀ ವಿವೇಕ್ ವಿನ್ಸೆಂಟ್ ಪ್ಯಾಸ್ರವರನ್ನು ಚರ್ಚ್ ವತಿಯಿಂದ ಸನ್ಮಾನಿಸಲಾಯಿತು. ಸಂತ ಅಂತೋನಿ ಚರ್ಚ್ನ ಧರ್ಮಗುರುಗಳಾದ ವಂದನೀಯ ಫಾದರ್ ಜೆರೋಮ್ ಡಿ'ಸೋಜರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂತ ಅಂತೋನಿ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಲ್ವಿನ್ ಸೆರಾವೊ, ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಸಂಜಯ್ ಮಿರಾಂದ, ಕಾವ್ಯದರ್ಶಿ ಶ್ರೀಮತಿ ಎವಿನ್ ರೊಡ್ರಿಗಸ್, ವಿವಿಧ ಆಯೋಗಗಳ ಸಂತೋಜಕರಾದ ಶ್ರೀ ಸುನಿಲ್ ಡಿ'ಸೋಜ ಉಪಸ್ಥಿತರಿದ್ದರು. ಶ್ರೀ ಸುನಿಲ್ ಡಿ'ಸೋಜರವರು ಸ್ವಾಗತಿಸಿ, ಶ್ರೀ ಸಂಜಯ್ ಮಿರಾಂದ ಧನ್ಯವಾದವಿತ್ತರು. ಶ್ರೀ ವಿನ್ಸೆಂಟ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ನಾರಾವಿ ಘಟಕದ ಸದಸ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಚರ್ಚ್ನ ಎಲ್ಲಾ ಕ್ರೈಸ್ತ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.